VIDEO: ರಸ್ತೆ ಇಲ್ಲ.. ಆಸ್ಪತ್ರೆ ಸಾಗಿಸುವ ವೇಳೆ ಅಣ್ಣನ ಹೆಗಲ ಮೇಲೆಯೇ ತಂಗಿ ಸಾವು!

author-image
AS Harshith
Updated On
VIDEO: ರಸ್ತೆ ಇಲ್ಲ.. ಆಸ್ಪತ್ರೆ ಸಾಗಿಸುವ ವೇಳೆ ಅಣ್ಣನ ಹೆಗಲ ಮೇಲೆಯೇ ತಂಗಿ ಸಾವು!
Advertisment
  • ಈ ದೃಶ್ಯ ಕಂಡಾಗ ಎಂಥವರ ಕಣ್ಣಲ್ಲೂ ಕಣ್ಣೀರು ಬರುತ್ತೆ
  • ಟೈಫಾಡ್​​ನಿಂದ ಬಳಲುತ್ತಿದ್ದ ತಂಗಿ ಅಣ್ಣನ ಹೆಗಲ ಮೇಲೆ ಸಾವು
  • ತಂಗಿಯನ್ನು ಹೆಗಲ ಮೇಲೆ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಣ್ಣ

ಸಾವು ಸಹಜ. ಆದರೆ ಅಣ್ಣನ ಹೆಗಲ ಮೇಲೆಯೇ ಸಹೋದರಿ ಸಾವನ್ನಪ್ಪಿದರೆ ಹೇಗೆ?. ಇಂತಹದೊಂದು ಹೃದಯ ವಿದ್ರಾವಕ ಘಟನೆ ಭಾರತದಲ್ಲಿ ನಡೆದಿದೆ. ದೃಶ್ಯವನ್ನ ಗಮನಿಸಿದಾಗ ಕಣ್ಣಾಲಿಗಳೇ ಒದ್ದೆಯಾಗುತ್ತವೆ.

ಉತ್ತರ ಪ್ರದೇಶದ ಕೆಲವೆಡೆ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಆದರೆ ಇದರ ನಡುವೆ ಲಖಿಂಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಖೆರಿ ಜಿಲ್ಲೆಯಲ್ಲಿ ಹದಿಹರೆಯದ ಶಿವಾನಿ ಎಂಬ ಬಾಲಕಿ ಟೈಫಾಯಿಡ್​ನಿಂದ ಕಂಗಾಲಾಗಿದ್ದಳು. ಆದರೆ ಆಕೆಯನ್ನು ಅಣ್ಣ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾಳೆ. ಸದ್ಯ ಈ ಘಟನೆ ದೃಶ್ಯ ಸಮೇತ ವೈರಲ್​ ಆಗಿದೆ.


">July 12, 2024

ಮಳೆಯಿಂದಾಗಿ ಉತ್ತರ ಪ್ರದೇಶದ ಕೆಲವೆಡೆ ಪ್ರವಾಹ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಸಹ ಕೊಚ್ಚಿಹೋಗಿವೆ. ಇದರಿಂದಾಗಿ ಸಂಪರ್ಕ ಸಾಧಿಸುವುದು ಕಷ್ಟವಾಗಿದೆ. ಹಾಗಾಗಿ ಸಹೋದರ ತನ್ನ ಸಹೋದರಿಗೆ ಚಿಕಿತ್ಸೆ ನೀಡಲು ಹೆಗಲ ಮೇಲೆ ಹೊತ್ತುಕೊಂಡು ಕಾಲು ದಾರಿಯಲ್ಲಿ ಸಾಗಿದ್ದಾನೆ. ಆದರೆ ಬಾಲಕಿ ಅಣ್ಣನ ಹೆಗಲ ಮೇಲೆಯೇ ಸಾವನ್ನಪ್ಪಿದ್ದಾಳೆ.


">July 12, 2024

ಟ್ವಿಟ್ಟರ್​ನಲ್ಲಿ ಈ ದೃಶ್ಯ ವೈರಲ್​ ಆಗುತ್ತಿದ್ದು, ಉತ್ತರ ಪ್ರದೇಶದಲ್ಲಿನ ವ್ಯವಸ್ಥೆ ಬಗ್ಗೆ ಅನೇಕರು ಕೆಂಡಕಾರಿದ್ದಾರೆ. ಅದರಲ್ಲೂ ಜೀವ ಉಳಿಸಲು ಜನರು ಪರದಾಡುತ್ತಿರುವ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment